ಹಂಬು ಮಲ್ಲಿಗೆ (ಟ್ರೀ ಜಾಸ್ಮಿನ್) ಜಾಸ್ಮಿನಮ್ ಆರ್ಬಾರೆಸೆನ್ಸ್ ಎಂಬ ಸಸ್ಯಶಾಸ್ತ್ರೀಯ ಹೆಸರನ್ನು ಹೊಂದಿರುವ ಒಂದು ಹೂಬಿಡುವ ಸಸ್ಯ. ಸುಮಾರು 1400 ಮೀ. ಎತ್ತರದವರೆಗಿನ ಬೆಟ್ಟಪ್ರದೇಶಗಳಲ್ಲಿ ಬೆಳೆಯುವ ಇದು ಉಪಹಿಮಾಲಯ ಶ್ರೇಣಿ, ಬಂಗಾಲ, ಒರಿಸ್ಸ, ಆಂಧ್ರದ ವಿಶಾಖಪಟ್ಟಣ ಜಿಲ್ಲೆ ಮುಂತಾದೆಡೆಗಳಲ್ಲಿ ಸಾಮಾನ್ಯ. == ಗುಣಲಕ್ಷಣಗಳು == ಎಲೆಗಳು ಸರಳರೀತಿಯವು, ಅಭಿಮುಖ ರೀತಿಯಲ್ಲಿ ಜೋಡಣೆಗೊಂಡಿವೆ. ಹೂಮಂಜರಿ ಸೀಮಾಕ್ಷಿ ಮಾದರಿಯದು, ಒಂದೊಂದು ಮಂಜರಿಯಲ್ಲಿ 15-20 ಅಚ್ಚಬಿಳಿಯ ಹಾಗೂ ಅತ್ಯಂತ್ಯ ಸುವಾಸನೆಯುಳ್ಳ ಹೂಗಳಿರುವುವು. == ಉಪಯೋಗಗಳು == ಇದರ ಎಲೆಯ ರಸವನ್ನು ಬೆಳ್ಳುಳ್ಳಿ, ಮೆಣಸು ಮುಂತಾದವುಗಳೊಂದಿಗೆ ಸೇರಿಸಿ ವಮನಕಾರಿಯಾಗಿ ಬಳಸುವುದಿದೆ. ಎಲೆಗಳು ಪ್ರತಿಬಂಧಕ ಹಾಗೂ ರೋಚಕವೆಂದು ಹೆಸರಾಗಿವೆ. ಬರಗಾಲದಲ್ಲಿ ಇದರ ಬೀಜಗಳನ್ನು ತಿನ್ನುವುದಿದೆ. == ಉಲ್ಲೇಖಗಳು ==